15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯ ಜಂಟಿ ಹೇಳಿಕೆ: ನಮ್ಮ ಮುಂದಿನ ಪೀಳಿಗೆಯ ಭದ್ರತೆ ಮತ್ತು ಸಮೃದ್ಧಿಗಾಗಿ ಸಹಭಾಗಿತ್ವ
August 29th, 07:06 pm
ಜಪಾನ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಇಶಿಬಾ ಶಿಗೇರು ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಆಗಸ್ಟ್ 29-30, ರಂದು 15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಗಾಗಿ ಜಪಾನ್‌ಗೆ ಅಧಿಕೃತ ಭೇಟಿ ನೀಡಿದರು. 2025 ರ ಆಗಸ್ಟ್ 29 ರಂದು ಸಂಜೆ ಪ್ರಧಾನಮಂತ್ರಿ ಮೋದಿ ಅವರನ್ನು ಪ್ರಧಾನಮಂತ್ರಿ ಇಶಿಬಾ ಅವರು ಪ್ರಧಾನಮಂತ್ರಿ ಕಚೇರಿಯಲ್ಲಿ (ಕಾಂಟೆ) ಬರಮಾಡಿಕೊಂಡರು, ಅಲ್ಲಿ ಅವರಿಗೆ ವಿಧ್ಯುಕ್ತ ಗೌರವ ರಕ್ಷೆಯನ್ನು ನೀಡಲಾಯಿತು. ಇಬ್ಬರು ಪ್ರಧಾನಮಂತ್ರಿಗಳು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದರು, ಈ ಸಂದರ್ಭದಲ್ಲಿ ಅವರು ನಾಗರಿಕ ಸಂಬಂಧಗಳು, ಹಂಚಿಕೆಯ ಮೌಲ್ಯಗಳು ಮತ್ತು ಆಸಕ್ತಿಗಳು, ಸಾಮಾನ್ಯ ಕಾರ್ಯತಂತ್ರದ ದೃಷ್ಟಿಕೋನ ಮತ್ತು ಪರಸ್ಪರ ಗೌರವದಲ್ಲಿ ಬೇರೂರಿರುವ ಭಾರತ ಮತ್ತು ಜಪಾನ್ ನಡುವಿನ ದೀರ್ಘಕಾಲದ ಸ್ನೇಹವನ್ನು ನೆನಪಿಸಿಕೊಂಡರು. ಕಳೆದ ದಶಕದಲ್ಲಿ ಭಾರತ-ಜಪಾನ್ ಪಾಲುದಾರಿಕೆಯು ಮಾಡಿದ ಮಹತ್ವದ ಪ್ರಗತಿಯನ್ನು ಇಬ್ಬರೂ ಪ್ರಧಾನಮಂತ್ರಿಗಳು ಶ್ಲಾಘಿಸಿದರು ಮತ್ತು ಮುಂಬರುವ ದಶಕಗಳಲ್ಲಿ ಪರಸ್ಪರ ಭದ್ರತೆ ಮತ್ತು ಸಮೃದ್ಧಿಯನ್ನು ಸಾಧಿಸಲು ಕಾರ್ಯತಂತ್ರದ ಮತ್ತು ಭವಿಷ್ಯತ್ತಿನ ಪಾಲುದಾರಿಕೆಯನ್ನು ಬಲಪಡಿಸುವ ಮಾರ್ಗಗಳ ಕುರಿತು ರಚನಾತ್ಮಕ ಚರ್ಚೆ ನಡೆಸಿದರು.ಪ್ರಧಾನಮಂತ್ರಿ ಅವರ ಜಪಾನ್ ಮತ್ತು ಚೀನಾ ದೇಶಗಳ ಭೇಟಿಯ ಮುನ್ನಾ ದಿನದಂದು ನೀಡಿರುವ ನಿರ್ಗಮನ ಹೇಳಿಕೆ
August 28th, 08:40 pm
ನನ್ನ ಭೇಟಿಯ ಸಮಯದಲ್ಲಿ, ಕಳೆದ ಹನ್ನೊಂದು ವರ್ಷಗಳಲ್ಲಿ ಆಗಿರುವ ಸ್ಥಿರತೆ ಕುರಿತು ಮತ್ತು ಗಮನಾರ್ಹ ಪ್ರಗತಿಯನ್ನು ಸಾಧಿಸಿರುವ ನಮ್ಮ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಮುಂದಿನ ಹಂತವನ್ನು ರೂಪಿಸುವತ್ತ ನಾವು ಗಮನಹರಿಸುತ್ತೇವೆ. ನಮ್ಮ ಸಹಯೋಗಕ್ಕೆ ಹೊಸ ರೆಕ್ಕೆ ಹಾಗೂ ಆಯಾಮಗಳನ್ನು ನೀಡಲು, ನಮ್ಮ ಆರ್ಥಿಕ ಮತ್ತು ಹೂಡಿಕೆ ಸಂಬಂಧಗಳ ವ್ಯಾಪ್ತಿ ಮತ್ತು ಮಹತ್ವಾಕಾಂಕ್ಷೆಯನ್ನು ವಿಸ್ತರಿಸಲು ಮತ್ತು ಕೃತಕ ಬುದ್ಧಿಮತ್ತೆ (ಎಐ)ಮತ್ತು ಸೆಮಿಕಂಡಕ್ಟರ್ ಗಳು ಸೇರಿದಂತೆ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಮುನ್ನಡೆಸಲು ನಾವು ಪ್ರಯತ್ನಿಸುತ್ತೇವೆ. ಈ ಭೇಟಿಯು ನಮ್ಮ ನಾಗರಿಕತೆಯ ಪರಸ್ಪರ ಬಂಧಗಳು ಮತ್ತು ನಮ್ಮ ಜನರನ್ನು ಸಂಪರ್ಕಿಸುವ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸಲು ಒಂದು ಅವಕಾಶವಾಗಿದೆ.ಆಸ್ಟ್ರೇಲಿಯಾದ ಉಪ ಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವರು ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಮಾಡಿದರು
June 04th, 04:52 pm
ಆಸ್ಟ್ರೇಲಿಯಾದ ಉಪ ಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವ ಗೌರವಾನ್ವಿತ ರಿಚರ್ಡ್ ಮಾರ್ಲ್ಸ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಇತ್ತೀಚಿನ ಫೆಡರಲ್ ಚುನಾವಣೆಗಳಲ್ಲಿ ಆಸ್ಟ್ರೇಲಿಯಾದ ಲೇಬರ್ ಪಕ್ಷದ ಐತಿಹಾಸಿಕ ವಿಜಯಕ್ಕಾಗಿ ಉಪ ಪ್ರಧಾನಿ ಮಾರ್ಲೆಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.