ಪವಿತ್ರ ಶ್ರೀ ಅಮರನಾಥ ಯಾತ್ರೆಯ ಆರಂಭದ ಸಂದರ್ಭದಲ್ಲಿ ಸಂಸ್ಕೃತ ಸುಭಾಷಿತವನ್ನು ಹಂಚಿಕೊಳ್ಳುವ ಮೂಲಕ ಶಿವನ ಎಲ್ಲಾ ಭಕ್ತರಿಗೆ ಶುಭ ಕೋರಿದ ಪ್ರಧಾನಮಂತ್ರಿ
July 03rd, 03:56 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆರಂಭವಾಗಿರುವ ಪವಿತ್ರ ಶ್ರೀ ಅಮರನಾಥ ಯಾತ್ರೆ ಹಿನ್ನೆಲೆಯಲ್ಲಿ ಶಿವಭಕ್ತರೆಲ್ಲರಿಗೂ ಸಂಸ್ಕೃತ ಸುಭಾಷಿತದ ಮೂಲಕ ಶುಭಾಶಯ ಕೋರಿದ್ದಾರೆ.ಅಮರನಾಥ ಯಾತ್ರಿಕರಿಗೆ ಪ್ರಧಾನಮಂತ್ರಿ ಅವರು ಪತ್ರ ಬರೆದು, ಪವಿತ್ರ ಯಾತ್ರೆಯನ್ನು ಪಂಚ ಸಂಕಲ್ಪಗಳೊಂದಿಗೆ ಸಂಬಂಧ ಕಲ್ಪಿಸಿದ್ದಾರೆ
July 03rd, 03:53 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರ್ಷಿಕ ಅಮರನಾಥ ಯಾತ್ರೆ ಕೈಗೊಳ್ಳುತ್ತಿರುವ ಭಕ್ತರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದು, ಅವರ ಯಾತ್ರೆ ಎಲ್ಲ ರೀತಿಯಲ್ಲೂ ಸುರಕ್ಷಿತ ಹಾಗೂ ಶುಭಕರವಾಗಿರಲಿ ಎಂದು ಹಾರೈಸಿದ್ದಾರೆ. ಬಾಬಾ ಬರ್ಫಾನಿ ಅವರ ದರ್ಶನಕ್ಕೆ ಸಂಬಂಧಿಸಿದ ಅಮರನಾಥ ಯಾತ್ರೆಯು ನಮ್ಮ ಆಧ್ಯಾತ್ಮಿಕ ಪರಂಪರೆ ಮತ್ತು ಸಾಂಸ್ಕೃತಿಕ ಏಕತೆಯ ಶಾಶ್ವತ ಅಧ್ಯಾಯವಾಗಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ.