ವಿಶ್ವದ ಎಲ್ಲಾ ನಾಯಕರು ಮತ್ತು ನಾಗರಿಕರ ಆತ್ಮೀಯ ಹಾಗೂ ಹೃತ್ಪೂರ್ವಕವಾದ ಶುಭಾಶಯಗಳಿಗೆ ಪ್ರಧಾನಮಂತ್ರಿಯವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ
June 10th, 11:50 pm
ಪ್ರಧಾನಮಂತ್ರಿಯವರು ವಿಶ್ವದ ಎಲ್ಲಾ ನಾಯಕರು ಮತ್ತು ಎಲ್ಲಾ ವರ್ಗದ ಜನರಿಗೆ ಅವರ ಆತ್ಮೀಯ ಶುಭಾಶಯಗಳು ಮತ್ತು ಅಭಿನಂದನಾ ಸಂದೇಶಗಳಿಗಾಗಿ ತಮ್ಮ ಹೃತ್ಪೂರ್ವಕವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಶುಭಾಶಯಗಳಿಂದ ತೀವ್ರವಾಗಿ ಪ್ರಭಾವಿತರಾದ ಅವರು, ಭಾರತಕ್ಕೆ ಸೇವೆ ಸಲ್ಲಿಸುವುದು ಮತ್ತು ರಾಷ್ಟ್ರದ ಅಭಿವೃದ್ಧಿಯ ಹಾದಿಯಲ್ಲಿ ಕೊಡುಗೆ ನೀಡುವುದು ತಮ್ಮ ಒಂದು ಸೌಭಾಗ್ಯ ಎಂದು ಹೇಳಿದರು. ಜನರ ನಂಬಿಕೆಯೇ ತಮ್ಮ ಶಕ್ತಿಯ ದೊಡ್ಡ ಮೂಲ ಎಂದು ಒತ್ತಿ ಹೇಳಿದ ಪ್ರಧಾನಿಯವರು, ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು, 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸಲು ಮತ್ತು ಭಾರತದ ಜಾಗತಿಕ ಪಾಲುದಾರಿಕೆಗಳನ್ನು ಮತ್ತಷ್ಟು ಬಲಪಡಿಸಲು ಇನ್ನೂ ಹೆಚ್ಚಿನ ಸಮರ್ಪಣೆಯೊಂದಿಗೆ ಕೆಲಸ ಮಾಡುವ ತಮ್ಮ ಸಂಪೂರ್ಣ ಬದ್ಧತೆಯನ್ನು ಪುನರುಚ್ಚರಿಸಿದರು.Prime Minister attends Raisina Dialogue 2026
March 05th, 08:31 pm
PM Modi today attended the Raisina Dialogue 2026 in New Delhi. In a post on X, the PM said he listened to the insightful address by Finland President Alexander Stubb, in which he covered a wide range of subjects.ಫಿನ್‌ಲೆಂಡ್ ಗಣರಾಜ್ಯದ ಅಧ್ಯಕ್ಷರ ಅಧಿಕೃತ ಭೇಟಿಯ ಕುರಿತು ಭಾರತ – ಫಿನ್‌ಲೆಂಡ್ ಜಂಟಿ ಹೇಳಿಕೆ
March 05th, 08:03 pm
ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಫಿನ್‌ಲೆಂಡ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಡಾ. ಅಲೆಕ್ಸಾಂಡರ್ ಸ್ಟಬ್ ಅವರು ಮಾರ್ಚ್ 4-7, 2026 ರವರೆಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಪ್ರಸ್ತುತ ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ಅಧ್ಯಕ್ಷ ಸ್ಟಬ್ ಅವರು ನವದೆಹಲಿ ಮತ್ತು ಮುಂಬೈ ಪ್ರವಾಸ ಕೈಗೊಂಡಿದ್ದಾರೆ. ಫಿನ್‌ಲೆಂಡ್‌ನ ಹವಾಮಾನ ಮತ್ತು ಪರಿಸರ ಸಚಿವರಾದ ಶ್ರೀಮತಿ ಸಾರಿ ಮುಲ್ತಾಲಾ, ಉದ್ಯೋಗ ಸಚಿವರಾದ ಶ್ರೀ ಮಟಿಯಾಸ್ ಮಾರ್ಟಿನೆನ್ ಮತ್ತು ಅಧಿಕಾರಿಗಳು ಮತ್ತು ವ್ಯಾಪಾರ ನಾಯಕರನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗ ಅವರೊಂದಿಗೆ ಇದ್ದಾರೆ. ಪ್ರಧಾನಮಂತ್ರಿ ಮೋದಿ ಮಾರ್ಚ್ 5, 2026 ರಂದು ನವದೆಹಲಿಯಲ್ಲಿ ರೈಸಿನಾ ಸಂವಾದದ 11 ನೇ ಆವೃತ್ತಿಯನ್ನು ಉದ್ಘಾಟಿಸಿದರು, ಅಧ್ಯಕ್ಷರಾದ ಸ್ಟಬ್ ಮುಖ್ಯ ಅತಿಥಿಯಾಗಿ ಉದ್ಘಾಟನಾ ಭಾಷಣ ಮಾಡಿದರು. ಫೆಬ್ರವರಿ 2026 ರಲ್ಲಿ ನಡೆಯಲಿರುವ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಫಿನ್‌ಲೆಂಡ್ ಗಣರಾಜ್ಯದ ಪ್ರಧಾನಮಂತ್ರಿ ಶ್ರೀ ಪೆಟ್ಟೇರಿ ಓರ್ಪೊ ಭಾಗವಹಿಸಿದ್ದರು. ಆ ನಂತರ ಈಗ ಅಧ್ಯಕ್ಷ ಸ್ಟಬ್ ಭೇಟಿ ನೀಡಿದ್ದಾರೆ.ಫಿನ್ಲೆಂಡ್ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
March 05th, 11:55 am
ಫಿನ್ಲೆಂಡ್ ಅಧ್ಯಕ್ಷರಾಗಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವ ಅಧ್ಯಕ್ಷ ಸ್ಟಬ್ ಅವರಿಗೆ ನಾನು ಆತ್ಮೀಯ ಸ್ವಾಗತವನ್ನು ಕೋರುತ್ತೇನೆ. ಅಧ್ಯಕ್ಷ ಸ್ಟಬ್ ಅವರು ಪ್ರಸಿದ್ಧ ಜಾಗತಿಕ ನಾಯಕ ಮಾತ್ರವಲ್ಲ, ಗೌರವಾನ್ವಿತ ಚಿಂತಕ ಮತ್ತು ಲೇಖಕರೂ ಆಗಿದ್ದಾರೆ.ಫಿನ್ಲ್ಯಾಂಡ್ ಅಧ್ಯಕ್ಷರಾದ ಅಲೆಕ್ಸಾಂಡರ್ ಸ್ಟಬ್ ಅವರನ್ನು ಭಾರತಕ್ಕೆ ಸ್ವಾಗತಿಸಿದ ಪ್ರಧಾನಮಂತ್ರಿ
March 04th, 12:04 pm
ಭಾರತಕ್ಕೆ ಅಧಿಕೃತ ಪ್ರವಾಸ ಕೈಗೊಂಡಿರುವ ಫಿನ್ಲ್ಯಾಂಡ್ ಗಣರಾಜ್ಯದ ಅಧ್ಯಕ್ಷರಾದ ಶ್ರೀ ಅಲೆಕ್ಸಾಂಡರ್ ಸ್ಟಬ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಗತಿಸಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಫಿನ್ಲೆಂಡ್ ಅಧ್ಯಕ್ಷರಾದ ಅಲೆಕ್ಸಾಂಡರ್ ಸ್ಟಬ್ ದೂರವಾಣಿ ಕರೆ
August 27th, 08:32 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫಿನ್ಲೆಂಡ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಅಲೆಕ್ಸಾಂಡರ್ ಸ್ಟಬ್ ಅವರಿಂದ ದೂರವಾಣಿ ಕರೆ ಸ್ವೀಕರಿಸಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫಿನ್ಲೆಂಡ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಅಲೆಕ್ಸಾಂಡರ್ ಸ್ಟಬ್ ಅವರಿಂದ ದೂರವಾಣಿ ಕರೆ ಸ್ವೀಕರಿಸಿದರು
April 16th, 05:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫಿನ್ಲೆಂಡ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಅಲೆಕ್ಸಾಂಡರ್ ಸ್ಟಬ್ ಅವರೊಂದಿಗೆ ಇಂದು ದೂರವಾಣಿ ಸಂಭಾಷಣೆ ನಡೆಸಿದರು.