ಅಹಮದಾಬಾದ್ ಮೆಟ್ರೋ ರೈಲು ಯೋಜನೆ 2ಎ ಹಂತಕ್ಕೆ (ಕೋಟೇಶ್ವರ ರಸ್ತೆಯಿಂದ ವಿಮಾನ ನಿಲ್ದಾಣ ಕಾರಿಡಾರ್) ಗೆ ಕೇಂದ್ರ ಸಂಪುಟ ಅನುಮೋದನೆ
June 10th, 01:59 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 6.032 ಕಿ.ಮೀ ಉದ್ದದ ಕಾರಿಡಾರ್ ಹೊಂದಿರುವ ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ ಹಂತ 2(ಎ) ಗೆ ಅನುಮೋದನೆ ನೀಡಿದ್ದು, ಅದರಲ್ಲಿ 05 ನಿಲ್ದಾಣಗಳು (04 ಎತ್ತರಿಸಿದ ಮತ್ತು 01 ನೆಲದಾಳದಲ್ಲಿ) ಇರುತ್ತವೆ. ಹಂತ 2(ಎ) ಕಾರ್ಯಾಚರಣೆಯ ನಂತರ ಅಹಮದಾಬಾದ್-ಗಾಂಧಿನಗರವು 77.63 ಕಿ.ಮೀ ಸಕ್ರಿಯ ಮೆಟ್ರೋ ರೈಲು ಜಾಲವನ್ನು ಹೊಂದಿರುತ್ತದೆ. ಹಂತ 2(ಎ) ಕಾರಿಡಾರ್‌ನಲ್ಲಿರುವ ನಿಲ್ದಾಣಗಳ ಹೆಸರುಗಳು- ಆಶ್ರಮ ರಸ್ತೆ, ಕೋಟೇಶ್ವರ ಪ್ರಾಚೀನ್ ಮಂದಿರ, ಸಬರಮತಿ ನದಿ, ಸರ್ದಾರ್ ನಗರ ಮತ್ತು ವಿಮಾನ ನಿಲ್ದಾಣ.ಗುಜರಾತ್ ಮೆಟ್ರೋ ರೈಲು ನಿಗಮ ನಿಯಮಿತ (ಜಿ ಎಂ ಆರ್ ಸಿ)ಯ ಗಿಫ್ಟ್ ಸಿಟಿಯಿಂದ ಶಹಪುರದವರೆಗೆ ಹಾಲಿ ಇರುವ ಉತ್ತರ-ದಕ್ಷಿಣ ಕಾರಿಡಾರ್ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
February 24th, 03:33 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಗಿಫ್ಟ್ ಸಿಟಿಯಿಂದ ಶಹಪುರದವರೆಗಿನ 3.33 ಕಿಲೋಮೀಟರ್ ಉದ್ದದ ಮೂರು ಎತ್ತರದ ನಿಲ್ದಾಣಗಳನ್ನು ಒಳಗೊಂಡ ಹಾಲಿ ಇರುವ ಉತ್ತರ ದಕ್ಷಿಣ ಕಾರಿಡಾರ್ ಮೆಟ್ರೊ ರೈಲು ಸಂಪರ್ಕ ವಿಸ್ತರಣೆಗೆ ಇಂದು ಅನುಮೋದನೆ ನೀಡಿದೆ. ಇದು ಈ ಯೋಜನೆಯನ್ನು ಸುಮಾರು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ ಹಂತ-II ಅನ್ನು ಉದ್ಘಾಟಿಸಿದರು
September 16th, 02:42 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ 2ನೇ ಹಂತವನ್ನು(ಹಂತ-II) ಉದ್ಘಾಟಿಸಿದರು. ಮೆಟ್ರೊ ಪ್ರಯಾಣದ ವೇಳೆ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.