“ಕೃಷಿ ಮತ್ತು ಗ್ರಾಮೀಣ ಪರಿವರ್ತನೆ” ಕುರಿತ ಬಜೆಟ್ ನಂತರದ ವೆಬಿನಾರ್‌ ಉದ್ದೇಶಿಸಿ ಪ್ರಧಾನಮಂತ್ರಿ ಅವರ​​​​​​​ ಭಾಷಣ

March 06th, 01:14 pm

ಬಜೆಟ್ ವೆಬಿನಾರ್ ಸರಣಿಯ 3ನೇ ವೆಬಿನಾರ್‌ನಲ್ಲಿ, ನಿಮ್ಮೆಲ್ಲರಿಗೂ ನನ್ನ ಆತ್ಮೀಯ ಸ್ವಾಗತ ಕೋರುತ್ತೇನೆ. ಇದಕ್ಕೂ ಮೊದಲು ತಂತ್ರಜ್ಞಾನ, ಸುಧಾರಣೆಗಳು ಮತ್ತು ಆರ್ಥಿಕ ಬೆಳವಣಿಗೆಯಂತಹ ಪ್ರಮುಖ ವಿಷಯಗಳ ಕುರಿತು 2 ವೆಬಿನಾರ್‌ಗಳನ್ನು ನಡೆಸಲಾಯಿತು. ಇಂದು ಚರ್ಚೆಯು ಗ್ರಾಮೀಣ ಆರ್ಥಿಕತೆ ಮತ್ತು ಕೃಷಿಯಂತಹ ನಿರ್ಣಾಯಕ ಕ್ಷೇತ್ರಗಳ ಮೇಲೆ ಕೇಂದ್ರೀಕೃತವಾಗಿದೆ. ನೀವೆಲ್ಲರೂ ನಿಮ್ಮ ಅಮೂಲ್ಯ ಸಲಹೆಗಳೊಂದಿಗೆ ಬಜೆಟ್ ತಯಾರಿಕೆಯ ಪ್ರಕ್ರಿಯೆಗೆ ಅಪಾರ ಕೊಡುಗೆ ನೀಡಿದ್ದೀರಿ. ನಿಮ್ಮ ಸಲಹೆ ಸೂಚನೆಗಳು ಬಜೆಟ್‌ನಲ್ಲಿ ಪ್ರತಿಫಲಿಸುತ್ತಿವೆ, ಅವು ತುಂಬಾ ಉಪಯುಕ್ತವಾಗಿವೆ ಎಂಬುದನ್ನು ನೀವು ಗಮನಿಸಿರಬೇಕು. ಆದರೆ ಈಗ ಬಜೆಟ್ ಮಂಡಿಸಲಾಗಿದೆ, ದೇಶವು ತನ್ನ ಸಂಪೂರ್ಣ ಸಾಮರ್ಥ್ಯ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ನಿಮ್ಮ ಅನುಭವ, ನಿಮ್ಮ ಸಲಹೆಗಳು ಮತ್ತು ಹೆಚ್ಚಿನ ಸಂಖ್ಯೆಯ ಜನರಿಗೆ ಬಜೆಟ್‌ನ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಸರಳ ಮಾರ್ಗಗಳು ಅತ್ಯಗತ್ಯ. ಬಜೆಟ್‌ನಲ್ಲಿ ನಿಗದಿಪಡಿಸಿದ ಪ್ರತಿ ಪೈಸೆಯನ್ನು ಸಂಪೂರ್ಣವಾಗಿ ಮತ್ತು ತ್ವರಿತವಾಗಿ ಹೇಗೆ ಬಳಸಿಕೊಳ್ಳಬಹುದು? ಈ ವೆಬಿನಾರ್‌ನಲ್ಲಿ ನಿಮ್ಮ ಸಲಹೆಗಳು ಸಹ ಅಷ್ಟೇ ಮುಖ್ಯವಾಗಿವೆ.

ಕೃಷಿ ಮತ್ತು ಗ್ರಾಮೀಣ ಪರಿವರ್ತನೆಯ ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು

March 06th, 01:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೃಷಿ ಮತ್ತು ಗ್ರಾಮೀಣ ಪರಿವರ್ತನೆ ಕುರಿತಾದ ಬಜೆಟ್ ನಂತರದ ಮೂರನೇ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಿದರು. ತಂತ್ರಜ್ಞಾನ ಮತ್ತು ಆರ್ಥಿಕ ಬೆಳವಣಿಗೆಯ ಕುರಿತಾದ ಹಿಂದಿನ ಅಧಿವೇಶನಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಬಜೆಟ್ ರೂಪಿಸುವ ಸಮಯದಲ್ಲಿ ಪಾಲುದಾರರು ಮೌಲ್ಯಯುತವಾದ ಸಹಕಾರವನ್ನು ನೀಡಿದ್ದಾರೆ ಎಂದು ಹೇಳಿದರು. ಈಗ, ಬಜೆಟ್ ನಂತರ, ದೇಶವು ತನ್ನ ಪೂರ್ಣ ಸಾಮರ್ಥ್ಯದ ಪ್ರಯೋಜನಗಳನ್ನು ಪಡೆಯುವುದು ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಸಲಹೆಗಳು ಮತ್ತು ಈ ವೆಬಿನಾರ್ ಅತ್ಯಂತ ಮಹತ್ವದ್ದಾಗಿದೆ ಎಂದು ಶ್ರೀ ಮೋದಿ ಒತ್ತಿಹೇಳಿದರು.

1940 ಕೋಟಿ ರೂ.ಗಳ ಕೇಂದ್ರ ಪಾಲು ಸೇರಿದಂತೆ 2817 ಕೋಟಿ ರೂ. ವೆಚ್ಚದ ಡಿಜಿಟಲ್ ಕೃಷಿ ಮಿಷನ್‌ ಗೆ ಸಂಪುಟ ಅನುಮೋದನೆ ನೀಡಿದೆ

September 02nd, 06:30 pm

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ರಚಿಸುವುದು, ಡಿಜಿಟಲ್ ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆ (DGCES) ಅನುಷ್ಠಾನಗೊಳಿಸುವುದು ಮತ್ತು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿಂದ ಇತರ ಮಾಹಿತಿ ತಂತ್ರಜ್ಞಾನದ (ಐಟಿ) ಡಿಜಿಟಲ್ ಕೃಷಿ ಉಪಕ್ರಮಗಳನ್ನು ಬೆಂಬಲಿಸಲು ಮಿಷನ್ ಅನ್ನು ಒಂದು ಸಮೂಹ ಯೋಜನೆಯಾಗಿ ರೂಪಿಸಲಾಗಿದೆ.