ಇಥಿಯೋಪಿಯಾದ ಅಡಿಸ್ ಅಬಾಬಾದಲ್ಲಿರುವ ಅಡ್ವಾ ವಿಜಯ ಸ್ಮಾರಕದಲ್ಲಿ ಪ್ರಧಾನಮಂತ್ರಿ ಗೌರವ ಸಮರ್ಪಣೆ
December 17th, 01:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಡಿಸ್ ಅಬಾಬಾದಲ್ಲಿರುವ ಅಡ್ವಾ ವಿಜಯ ಸ್ಮಾರಕದಲ್ಲಿ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿದರು. 1896ರಲ್ಲಿ ಅಡ್ವಾ ಕದನದಲ್ಲಿ ತಮ್ಮ ರಾಷ್ಟ್ರದ ಸಾರ್ವಭೌಮತ್ವಕ್ಕಾಗಿ ಪರಮೋಚ್ಛ ತ್ಯಾಗ ಮಾಡಿದ ಧೈರ್ಯಶಾಲಿ ಇಥಿಯೋಪಿಯನ್ ಸೈನಿಕರಿಗೆ ಈ ಸ್ಮಾರಕವನ್ನು ಸಮರ್ಪಿಸಲಾಗಿದೆ. ಈ ಸ್ಮಾರಕವು ಅಡ್ವಾ ವೀರರ ನಿರಂತರ ಚೈತನ್ಯ ಮತ್ತು ದೇಶದ ಹೆಮ್ಮೆಯ ಸ್ವಾತಂತ್ರ್ಯ, ಘನತೆ ಮತ್ತು ಸ್ಥಿತಿಸ್ಥಾಪಕತ್ವದ ಪರಂಪರೆಗೆ ಸಲ್ಲುವ ಗೌರವವಾಗಿದೆ.ಇಥಿಯೋಪಿಯಾ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
December 17th, 12:25 pm
ಪುರಾತನ ಜ್ಞಾನ ಮತ್ತು ಆಧುನಿಕ ಆಕಾಂಕ್ಷೆಗಳನ್ನು ಹೊಂದಿರುವ ರಾಷ್ಟ್ರದ ಹೃದಯಭಾಗದಲ್ಲಿರುವ ಈ ಪ್ರಜಾಪ್ರಭುತ್ವದ ದೇವಾಲಯದಲ್ಲಿ ಉಪಸ್ಥಿತರಿರುವುದು ನನಗೆ ಗೌರವದ ಸಂಗತಿಯಾಗಿದೆ. ನಿಮ್ಮ ಸಂಸತ್ತು, ನಿಮ್ಮ ಜನತೆ ಮತ್ತು ನಿಮ್ಮ ಪ್ರಜಾಪ್ರಭುತ್ವದ ಪಯಣದ ಬಗ್ಗೆ ಅಪಾರ ಗೌರವವನ್ನಿಟ್ಟುಕೊಂಡು ನಾನು ಇಲ್ಲಿಗೆ ಬಂದಿದ್ದೇನೆ. ಭಾರತದ 140 ಕೋಟಿ ಜನರ ಪರವಾಗಿ, ನಾನು ಸ್ನೇಹ, ಸದ್ಭಾವನೆ ಮತ್ತು ಸಹೋದರತ್ವದ ಶುಭಾಶಯಗಳನ್ನು ಹೊತ್ತು ತಂದಿದ್ದೇನೆ.ಇಥಿಯೋಪಿಯಾದಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
December 17th, 12:12 pm
ಇಥಿಯೋಪಿಯಾದ ಕಾನೂನು ನಿರ್ಮಾಪಕರಿಗೆ ಭಾರತದ ಜನರಿಂದ ಸ್ನೇಹ ಮತ್ತು ಸದ್ಭಾವನೆಯ ಶುಭಾಶಯಗಳನ್ನು ಕೋರುವ ಮೂಲಕ ಪ್ರಧಾನಮಂತ್ರಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಸಂಸತ್ತನ್ನು ಉದ್ದೇಶಿಸಿ ಮಾತನಾಡುವುದು ಮತ್ತು ಈ ಪ್ರಜಾಪ್ರಭುತ್ವದ ದೇವಾಲಯದ ಮೂಲಕ ಇಥಿಯೋಪಿಯಾದ ಸಾಮಾನ್ಯ ಜನರನ್ನು ಉದ್ದೇಶಿಸಿ ಮಾತನಾಡುವುದು ಒಂದು ಸೌಭಾಗ್ಯ ಎಂಬುದರತ್ತ ಅವರು ಬೆಟ್ಟು ಮಾಡಿದರು. - ರೈತರು, ಉದ್ಯಮಿಗಳು, ಹೆಮ್ಮೆಯ ಮಹಿಳೆಯರು ಮತ್ತು ಯುವಜನರು - ದೇಶದ ಭವಿಷ್ಯವನ್ನು ರೂಪಿಸುತ್ತಿದ್ದಾರೆ ಎಂದು ಅವರು ಹೇಳಿದರು. ಇಥಿಯೋಪಿಯಾದ ಗ್ರೇಟ್ ಹಾನರ್ ನಿಶಾನ್ ಎಂಬ ಅತ್ಯುನ್ನತ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಅವರು ಇಥಿಯೋಪಿಯಾದ ಜನರು ಮತ್ತು ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಸಂಬಂಧದ ಮಹತ್ವವನ್ನು ಪರಿಗಣಿಸಿ, ಭೇಟಿಯ ಸಮಯದಲ್ಲಿ ಎರಡೂ ದೇಶಗಳ ನಡುವಿನ ಹಳೆಯ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆಯಾಗಿ ಉನ್ನತೀಕರಿಸಲಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು ಇದಕ್ಕೆ ತಮ್ಮ ಸಂತೃಪ್ತಿಯನ್ನು ವ್ಯಕ್ತಪಡಿಸಿದರು.