ಇಥಿಯೋಪಿಯಾದ ಅಡಿಸ್ ಅಬಾಬಾದಲ್ಲಿರುವ ಅಡ್ವಾ ವಿಜಯ ಸ್ಮಾರಕದಲ್ಲಿ ಪ್ರಧಾನಮಂತ್ರಿ ಗೌರವ ಸಮರ್ಪಣೆ
December 17th, 01:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಡಿಸ್ ಅಬಾಬಾದಲ್ಲಿರುವ ಅಡ್ವಾ ವಿಜಯ ಸ್ಮಾರಕದಲ್ಲಿ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿದರು. 1896ರಲ್ಲಿ ಅಡ್ವಾ ಕದನದಲ್ಲಿ ತಮ್ಮ ರಾಷ್ಟ್ರದ ಸಾರ್ವಭೌಮತ್ವಕ್ಕಾಗಿ ಪರಮೋಚ್ಛ ತ್ಯಾಗ ಮಾಡಿದ ಧೈರ್ಯಶಾಲಿ ಇಥಿಯೋಪಿಯನ್ ಸೈನಿಕರಿಗೆ ಈ ಸ್ಮಾರಕವನ್ನು ಸಮರ್ಪಿಸಲಾಗಿದೆ. ಈ ಸ್ಮಾರಕವು ಅಡ್ವಾ ವೀರರ ನಿರಂತರ ಚೈತನ್ಯ ಮತ್ತು ದೇಶದ ಹೆಮ್ಮೆಯ ಸ್ವಾತಂತ್ರ್ಯ, ಘನತೆ ಮತ್ತು ಸ್ಥಿತಿಸ್ಥಾಪಕತ್ವದ ಪರಂಪರೆಗೆ ಸಲ್ಲುವ ಗೌರವವಾಗಿದೆ.ಫಲಿತಾಂಶಗಳ ಪಟ್ಟಿ: ಇಥಿಯೋಪಿಯಾಕ್ಕೆ ಪ್ರಧಾನಮಂತ್ರಿ ಭೇಟಿ
December 16th, 10:41 pm
'ಕಾರ್ಯತಂತ್ರದ ಪಾಲುದಾರಿಕೆ'ಗೆ ದ್ವಿಪಕ್ಷೀಯ ಸಂಬಂಧಗಳ ಉನ್ನತೀಕರಣಇಥಿಯೋಪಿಯಾಗೆ ಪ್ರಧಾನಮಂತ್ರಿ ಆಗಮನ - ಭವ್ಯ ಸ್ವಾಗತ
December 16th, 06:21 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಥಿಯೋಪಿಯಾಗೆ ತಮ್ಮ ಮೊದಲ ದ್ವಿಪಕ್ಷೀಯ ಭೇಟಿಯಾಗಿ ಅಡಿಸ್ ಅಬಾಬಾ ತಲುಪಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರಿಗೆ ವಿಶೇಷ ಅಭಿವ್ಯಕ್ತಿಯೊಂದಿಗೆ ಇಥಿಯೋಪಿಯಾದ ಪ್ರಧಾನಮಂತ್ರಿ ಡಾ. ಅಬಿಯ್ ಅಹ್ಮದ್ ಅಲಿ ಅವರು ಆತ್ಮೀಯ ಮತ್ತು ವರ್ಣಮಯ ಸ್ವಾಗತ ನೀಡಿದರು.