ಹಿರಿಯ ನಟ ಶ್ರೀ ಧರ್ಮೇಂದ್ರ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
November 24th, 03:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿಗ್ಗಜ, ಹಿರಿಯ ನಟ ಶ್ರೀ ಧರ್ಮೇಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಇದರೊಂದಿಗೆ ಭಾರತೀಯ ಸಿನಿಮಾರಂಗದ ಯುಗವೊಂದು ಅಂತ್ಯವಾಗಿದೆ ಎಂದು ಬಣ್ಣಿಸಿದ್ದಾರೆ.ಶ್ರೀ ಸತೀಶ್ ಶಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿ
October 25th, 07:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಿರಿಯ ನಟ ಶ್ರೀ ಸತೀಶ್ ಶಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅವರನ್ನು ಭಾರತೀಯ ಮನರಂಜನೆಯ ನೈಜ ದಂತಕಥೆ ಎಂದು ಬಣ್ಣಿಸಿದ್ದಾರೆ.ಹಿರಿಯ ನಟ ಶ್ರೀ ಗೋವರ್ಧನ್ ಅಸ್ರಾಣಿ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
October 21st, 09:16 am
ಹಿರಿಯ ನಟರಾದ ಶ್ರೀ ಗೋವರ್ಧನ್ ಅಸ್ರಾಣಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಅವರು ತಮ್ಮ ಸಂದೇಶದಲ್ಲಿ, ಖ್ಯಾತ ದಂತಕಥೆ ಕಲಾವಿದರಿಗೆ ಗೌರವ ಸಲ್ಲಿಸಿದ್ದಾರೆ, ಭಾರತೀಯ ಚಿತ್ರರಂಗಕ್ಕೆ ಗೋವರ್ಧನ್ ಅಸ್ರಾಣಿಯವರ ಅಪಾರ ಕೊಡುಗೆ ಮತ್ತು ಪೀಳಿಗೆಯ ಪ್ರೇಕ್ಷಕರ ಮುಖದಲ್ಲಿ ಸಂತೋಷ ತರುವ ರೀತಿಯಲ್ಲಿ ನಟನೆ ಮಾಡುತ್ತಿದ್ದ ಅವರ ಸಾಮರ್ಥ್ಯವನ್ನು ಸ್ಮರಿಸಿಕೊಂಡಿದ್ದಾರೆ.ಮುಂಬೈಯ ವೇವ್ಸ್ ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಇಂಗ್ಲೀಷ್ ಅವತರಣಿಕೆ
May 01st, 03:35 pm
ಇಂದು ಮಹಾರಾಷ್ಟ್ರದ ಸಂಸ್ಥಾಪನಾ ದಿನ. ಛತ್ರಪತಿ ಶಿವಾಜಿ ಮಹಾರಾಜ್ ಅವರಿಗೆ ಗೌರವ ನಮನ ಮತ್ತು ಮಹಾರಾಷ್ಟ್ರ ದಿನದಂದು ಈ ನೆಲದ ಎಲ್ಲಾ ಸಹೋದರ ಸಹೋದರಿಯರಿಗೆ ಶುಭಾಶಯಗಳು!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೇವ್ಸ್ 2025 ಅನ್ನು ಉದ್ಘಾಟಿಸಿದರು
May 01st, 11:15 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ಭಾರತದ ಮೊದಲ ಜಾಗತಿಕ ಶ್ರವಣ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ-ವೇವ್ಸ್ 2025 ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಆಚರಿಸಲಾಗುತ್ತಿರುವ ಮಹಾರಾಷ್ಟ್ರ ದಿನ ಮತ್ತು ಗುಜರಾತ್ ರಾಜ್ಯೋತ್ಸವದ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರಿದರು. ಎಲ್ಲಾ ಅಂತರರಾಷ್ಟ್ರೀಯ ಗಣ್ಯರು, ರಾಯಭಾರಿಗಳು ಮತ್ತು ಸೃಜನಶೀಲ ಉದ್ಯಮದ ನಾಯಕರ ಉಪಸ್ಥಿತಿಯನ್ನು ಶ್ಲಾಘಿಸಿದ ಪ್ರಧಾನಿ, 100 ಕ್ಕೂ ಹೆಚ್ಚು ದೇಶಗಳ ಕಲಾವಿದರು, ನಾವೀನ್ಯಕಾರರು, ಹೂಡಿಕೆದಾರರು ಮತ್ತು ನೀತಿ ನಿರೂಪಕರು ಒಟ್ಟಾಗಿ ಪ್ರತಿಭೆ ಮತ್ತು ಸೃಜನಶೀಲತೆಯ ಜಾಗತಿಕ ಪೂರಕ ವ್ಯವಸ್ಥೆಗೆ ಅಡಿಪಾಯ ಹಾಕಿದ್ದಾರೆ ಎಂದು ಒತ್ತಿ ಹೇಳಿದರು. ವೇವ್ಸ್ ಕೇವಲ ಒಂದು ಸಂಕ್ಷಿಪ್ತ ರೂಪವಲ್ಲ, ಸಂಸ್ಕೃತಿ, ಸೃಜನಶೀಲತೆ ಮತ್ತು ಜಾಗತಿಕ ಸಂಪರ್ಕವನ್ನು ಪ್ರತಿನಿಧಿಸುವ ಅಲೆಯಾಗಿದೆ ಎಂದು ಅವರು ಹೇಳಿದರು, ಶೃಂಗಸಭೆಯು ಚಲನಚಿತ್ರಗಳು, ಸಂಗೀತ, ಗೇಮಿಂಗ್, ಅನಿಮೇಷನ್ ಮತ್ತು ಕಥೆ ಹೇಳುವಿಕೆಯ ವಿಸ್ತಾರವಾದ ಜಗತ್ತನ್ನು ಪ್ರದರ್ಶಿಸುತ್ತದೆ, ಕಲಾವಿದರು ಮತ್ತು ಕಂಟೆಂಟ್ ಸೃಷ್ಟಿಕರ್ತರು ಸಂಪರ್ಕ ಸಾಧಿಸಲು ಮತ್ತು ಸಹಕರಿಸಲು ಜಾಗತಿಕ ವೇದಿಕೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಈ ಐತಿಹಾಸಿಕ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲರನ್ನು ಪ್ರಧಾನಿ ಅಭಿನಂದಿಸಿದರು ಮತ್ತು ಭಾರತ ಮತ್ತು ವಿದೇಶಗಳಿಂದ ಬಂದ ಗಣ್ಯ ಅತಿಥಿಗಳಿಗೆ ಆತ್ಮೀಯ ಸ್ವಾಗತವನ್ನು ಕೋರಿದರು.ಬಾಲಿವುಡ್ ನ ಖ್ಯಾತ ನಟ, ನಿರ್ದೇಶಕ ಮನೋಜ್ ಕುಮಾರ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
April 04th, 08:34 am
ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ಮನೋಜ್ ಕುಮಾರ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಮನೋಜ್ ಕುಮಾರ್ ಅವರನ್ನು ಭಾರತೀಯ ಚಿತ್ರರಂಗದ ಐಕಾನ್ ಎಂದು ಶ್ಲಾಘಿಸಿದ ಪ್ರಧಾನಮಂತ್ರಿಗಳು, ಅವರ ಚಿತ್ರಗಳಲ್ಲಿ ದೇಶಭಕ್ತಿ ಪ್ರತಿಫಲಿಸುವ ಅಂಶಗಳು ವಿಶೇಷವಾಗಿ ಎದ್ದುಕಾಣುತ್ತವೆ ಎಂದಿದ್ದಾರೆ.People from different walks of life support PM’s clarion call to fight obesity
January 31st, 06:25 pm
Prime Minister Shri Narendra Modi recently gave a clarion call to fight obesity and reduce oil consumption. This has received wide support from doctors, sportspersons as well as people from different walks of life.ಮಹಾನ್ ದಿಗ್ಗಜ ರಾಜ್ ಕಪೂರ್ ಅವರ 100ನೇ ಜನ್ಮ ವಾರ್ಷಿಕೋತ್ಸವದಂದು ಪ್ರಧಾನಮಂತ್ರಿಯವರು ಅವರಿಗೆ ಗೌರವ ನಮನ ಸಲ್ಲಿಸಿದರು
December 14th, 11:17 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಚಲನಚಿತ್ರ ಲೋಕದ ಮಹಾನ್ ದಿಗ್ಗಜ ಶ್ರೀ ರಾಜ್ ಕಪೂರ್ ಅವರ 100 ನೇ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಅವರನ್ನು ದೂರದೃಷ್ಟಿಯ ಚಲನಚಿತ್ರ ನಿರ್ಮಾಪಕ, ನಟ ಮತ್ತು ಚಿರ ನಿರಂತರ ಶೋಮ್ಯಾನ್ ಎಂದು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. ಶ್ರೀ ರಾಜ್ ಕಪೂರ್ ಅವರು ಕೇವಲ ಚಲನಚಿತ್ರ ನಿರ್ಮಾಪಕರಲ್ಲ ಬದಲಾಗಿ ಭಾರತೀಯ ಸಿನಿಮಾವನ್ನು ಜಾಗತಿಕ ಹಂತಕ್ಕೆ ಕೊಂಡೊಯ್ದ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರು, ಚಲನಚಿತ್ರ ನಿರ್ಮಾಪಕರು ಮತ್ತು ನಟರ ಹಲವು ತಲೆಮಾರುಗಳು ಅವರಿಂದ ಬಹಳಷ್ಟು ಕಲಿಯಬಹುದಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದರು.ತಿರು ದೆಹಲಿ ಗಣೇಶ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ
November 10th, 05:48 pm
ಪ್ರಸಿದ್ಧ ಚಿತ್ರನಟ ತಿರು ದೆಹಲಿ ಗಣೇಶ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಅತುಲ್ಯ ನಟನಾ ಕೌಶಲ್ಯದಿಂದ ಆಶೀರ್ವದಿಸಲ್ಪಟ್ಟ ತಿರು ಗಣೇಶ್ ಅವರು, ತಾನು ನಟಿಸಿದ ಪ್ರತಿ ಪಾತ್ರಕ್ಕೂ ಮಹತ್ವ ತುಂಬಿದ್ದಾರೆ ಮತ್ತು ಪೀಳಿಗೆಯ ಪ್ರೇಕ್ಷಕರೊಂದಿಗೆ ಉತ್ತಮ ಸಂಪರ್ಕ ಸಾಧಿಸುವ ಅವರ ಸಾಮರ್ಥ್ಯಕ್ಕಾಗಿ ಅವರನ್ನು ಎಲ್ಲರೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.