ವರ್ಷದ ಯುಎನ್ ಮಿಲಿಟರಿ ಜೆಂಡರ್ ಅಡ್ವೊಕೇಟ್ ಪ್ರಶಸ್ತಿಗೆ ಭಾಜನರಾಗಿರುವ ಅಭಿಲಾಷಾ ಬರಾಕ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ
June 07th, 02:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಯುಎನ್ ಮಿಲಿಟರಿ ಜೆಂಡರ್ ಅಡ್ವೊಕೇಟ್ ಆಫ್ ದ ಇಯರ್’ ಪ್ರಶಸ್ತಿಗೆ ಭಾಜನರಾಗಿರುವ ಮೇಜರ್ ಅಭಿಲಾಷಾ ಬರಾಕ್ ಅವರನ್ನು ಇಂದು ಅಭಿನಂದಿಸಿದ್ದಾರೆ. ಮೇಜರ್ ಬರಾಕ್ ಅವರು ಲೆಬನಾನ್ ನ ವಿಶ್ವಸಂಸ್ಥೆ ಮಧ್ಯಂತರ ಪಡೆ (ಯು ಎನ್ ಐ ಎಫ್ ಐ ಎಲ್) ನಲ್ಲಿ ಎಂಗೇಜ್ ಮೆಂಟ್ ಟೀಮ್ ಕಮಾಂಡರ್ ಮತ್ತು ಜೆಂಡರ್ ಫೋಕಲ್ ಪಾಯಿಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಗಮನಿಸಿದರು.