79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವದೆಲ್ಲೆಡೆಗಿನ ನಾಯಕರಿಗೆ ಪ್ರಧಾನಮಂತ್ರಿ ಅವರು ಧನ್ಯವಾದ ಅರ್ಪಿಸಿದರು
August 15th, 07:26 pm
79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವದೆಲ್ಲೆಡೆಗಿನ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದರು.79ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣದ ಮುಖ್ಯಾಂಶಗಳು
August 15th, 03:52 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಕೆಂಪು ಕೋಟೆಯ ಕೊತ್ತಲಗಳಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಶ್ರೀ ಮೋದಿ ಅವರ 103 ನಿಮಿಷಗಳ ಕಾಲ ಕೆಂಪು ಕೋಟೆಯಿಂದ ಮಾಡಿದ ಭಾಷಣವು ಅತ್ಯಂತ ದೀರ್ಘ ಮತ್ತು ನಿರ್ಣಾಯಕ ಭಾಷಣವಾಗಿದ್ದು, 2047ರ ವೇಳೆಗೆ ವಿಕ್ಷಿತ ಭಾರತಕ್ಕಾಗಿ ದಿಟ್ಟ ಮಾರ್ಗಸೂಚಿಯನ್ನು ರೂಪಿಸಿದೆ. ಪ್ರಧಾನಮಂತ್ರಿ ಅವರ ಭಾಷಣವು ಸ್ವಾವಲಂಬನೆ, ನಾವೀನ್ಯತೆ ಮತ್ತು ನಾಗರಿಕ ಸಬಲೀಕರಣದ ಮೇಲೆ ಗಮನ ಕೇಂದ್ರೀಕರಿಸಿತ್ತು, ಇತರರನ್ನು ಅವಲಂಬಿಸಿದ ರಾಷ್ಟ್ರದಿಂದ ಜಾಗತಿಕವಾಗಿ ಆತ್ಮವಿಶ್ವಾಸ, ತಾಂತ್ರಿಕವಾಗಿ ಮುಂದುವರಿದ ಮತ್ತು ಆರ್ಥಿಕವಾಗಿ ಸ್ಥಿತಿಸ್ಥಾಪಕತ್ವದ ಶಕ್ತಿಯುಳ್ಳ ದೇಶದವರೆಗೆ ಭಾರತದ ಪ್ರಯಾಣವನ್ನು ಎತ್ತಿ ತೋರಿಸಿತು.ರೈತರಿಗೆ ಸ್ವಾತಂತ್ರ್ಯ ದಿನಾಚರಣೆಯ ಗೌರವ ಸಲ್ಲಿಸಿದ ಪ್ರಧಾನಮಂತ್ರಿ ಮೋದಿ: ರೈತರು ಭಾರತದ ಬೆನ್ನೆಲುಬು
August 15th, 12:02 pm
79ನೇ ಸ್ವಾತಂತ್ರ್ಯ ದಿನಾಚರಣೆಯಂದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ರೈತರಿಗೆ ಭಾವನಾತ್ಮಕ ಗೌರವ ಸಲ್ಲಿಸಿದರು, ರೈತರನ್ನು ಅವಲಂಬನೆಯಿಂದ ಸ್ವಾವಲಂಬನೆಯೆಡೆಗಿನ ರಾಷ್ಟ್ರದ ಪ್ರಯಾಣದ ಬೆನ್ನೆಲುಬು ಎಂದು ಬಣ್ಣಿಸಿದರು. ವಸಾಹತುಶಾಹಿ ಆಡಳಿತವು ದೇಶವನ್ನು ಹೇಗೆ ಬಡತನಕ್ಕೆ ದೂಡಿತು ಎಂಬುದನ್ನು ಅವರು ನೆನಪಿಸಿಕೊಂಡರು, ಆದರೆ ರೈತರ ದಣಿವರಿಯದ ಪ್ರಯತ್ನಗಳು ಭಾರತದ ಕಣಜಗಳನ್ನು ತುಂಬಿತು ಮತ್ತು ರಾಷ್ಟ್ರದ ಆಹಾರ ಸಾರ್ವಭೌಮತ್ವವನ್ನು ಭದ್ರಪಡಿಸಿದವು ಎಂದರು. ಪ್ರಧಾನಿಯವರ ಭಾಷಣವು ಹೃತ್ಪೂರ್ವಕ ಕೃತಜ್ಞತೆಯ ಜೊತೆಗೆ ಭಾರತೀಯ ಕೃಷಿಯ ಭವಿಷ್ಯದ ಸ್ಪಷ್ಟ ಮಾರ್ಗಸೂಚಿಯನ್ನು ಒಳಗೊಂಡಿತ್ತು.ಪ್ರಧಾನಮಂತ್ರಿ ಮೋದಿ ಅವರ 79ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣ: ವಿಕಸಿತ ಭಾರತ 2047ಗಾಗಿ ಒಂದು ದೃಷ್ಟಿಕೋನ
August 15th, 11:58 am
79ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಂಪು ಕೋಟೆಯಿಂದ 103 ನಿಮಿಷಗಳ ಕಾಲ ತಮ್ಮ ಸುದೀರ್ಘ ಮತ್ತು ಅತ್ಯಂತ ನಿರ್ಣಾಯಕ ಭಾಷಣವನ್ನು ಮಾಡಿದರು. 2047 ರ ವೇಳೆಗೆ ವಿಕಸಿತ ಭಾರತಕ್ಕಾಗಿ ದಿಟ್ಟ ಮಾರ್ಗಸೂಚಿಯನ್ನು ರೂಪಿಸಿದರು. ಸ್ವಾವಲಂಬನೆ, ನಾವೀನ್ಯತೆ ಮತ್ತು ನಾಗರಿಕ ಸಬಲೀಕರಣದ ಮೇಲೆ ತೀಕ್ಷ್ಣವಾದ ಗಮನ ಹರಿಸಿದ ಪ್ರಧಾನಮಂತ್ರಿ ಅವರು, ಇತರರ ಮೇಲೆ ಅವಲಂಬಿತವಾಗಿರುವ ರಾಷ್ಟ್ರದಿಂದ ಜಾಗತಿಕವಾಗಿ ಆತ್ಮವಿಶ್ವಾಸದ, ತಾಂತ್ರಿಕವಾಗಿ ಮುಂದುವರಿದ ಮತ್ತು ಆರ್ಥಿಕವಾಗಿ ಸ್ಥಿತಿಸ್ಥಾಪಕ ದೇಶವಾಗಿ ಭಾರತದ ಪ್ರಯಾಣವನ್ನು ಬಿಂಬಿಸಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಾಡಿದ ಪ್ರಮುಖ ಘೋಷಣೆಗಳು
August 15th, 10:32 am
ತಮ್ಮ 12ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪು ಕೋಟೆಯನ್ನು ಭಾರತದ ಪ್ರಗತಿಯ ಮುಂದಿನ ಅಧ್ಯಾಯದ ಉಡಾವಣಾ ವೇದಿಕೆಯನ್ನಾಗಿ ಪರಿವರ್ತಿಸಿದರು. 79ನೇ ಸ್ವಾತಂತ್ರ್ಯ ದಿನದಂದು, ಅವರು ಹಲವಾರು ದಿಟ್ಟ ಘೋಷಣೆಗಳನ್ನು ಮಾಡಿದರು, ಅವುಗಳು ರಾಷ್ಟ್ರವು ಭವಿಷ್ಯದತ್ತ ಹೆಜ್ಜೆ ಹಾಕುವುದು ಮಾತ್ರವಲ್ಲ, ಜಿಗಿಯಲು ಸಿದ್ಧವಾಗಿದೆ ಎಂಬುದನ್ನು ಸೂಚಿಸುತ್ತವೆ.ಪ್ರಧಾನಮಂತ್ರಿ ಮೋದಿ ಅವರ ಸ್ವಾತಂತ್ರ್ಯೋತ್ಸವ ದಿನದ ಭಾಷಣ: ಸುಧಾರಣೆ, ಸ್ವಾವಲಂಬನೆ ಮತ್ತು ಪ್ರತಿಯೊಬ್ಬ ಭಾರತೀಯನ ಸಬಲೀಕರಣದ ಮುನ್ನೋಟ
August 15th, 10:23 am
79ನೇ ಸ್ವಾತಂತ್ರ್ಯ ದಿನಾಚರಣೆಯಂದು, ಪ್ರಧಾನಮಂತ್ರಿ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು, ಭಾರತದ ಸ್ವಾವಲಂಬನೆ ಮತ್ತು ಪರಿವರ್ತನೆಯ ಪ್ರಯಾಣವನ್ನು ಎತ್ತಿ ತೋರಿದರು. ಕಳೆದ ದಶಕದಲ್ಲಿ, ಭಾರತವು ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯನ್ನು ಕೈಗೊಂಡಿದೆ. ಆದರೆ ಈಗ ಇನ್ನೂ ಹೆಚ್ಚಿನ ಶಕ್ತಿಯೊಂದಿಗೆ ಮುಂದುವರಿಯುವ ಸಮಯ ಬಂದಿದೆ ಎಂದು ಅವರು ಹೇಳಿದರು. ಕಾನೂನುಗಳು, ನಿಬಂಧನೆಗಳು ಮತ್ತು ಪ್ರಕ್ರಿಯೆಗಳನ್ನು ಸರಳೀಕರಿಸುವ, ಉದ್ಯಮಶೀಲತೆಯನ್ನು ಉತ್ತೇಜಿಸುವ ಆಧುನಿಕ, ದಕ್ಷ ಮತ್ತು ನಾಗರಿಕ ಸ್ನೇಹಿ ಪರಿಸರ ವ್ಯವಸ್ಥೆಯನ್ನು ರಚಿಸಲು ಸರ್ಕಾರ ಬದ್ಧವಾಗಿದೆ. ಜೊತೆಗೆ, ಪ್ರತಿಯೊಬ್ಬ ಭಾರತೀಯರೂ ವಿಕಸಿತ ಭಾರತವನ್ನು ನಿರ್ಮಿಸಲು ಕೊಡುಗೆ ನೀಡಬಹುದು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.ಆತ್ಮನಿರ್ಭರ ಭಾರತ: ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಡಿಪಾಯ
August 15th, 10:20 am
79ನೇ ಸ್ವಾತಂತ್ರ್ಯ ದಿನದಂದು, ರಕ್ಷಣೆ, ತಂತ್ರಜ್ಞಾನ, ಇಂಧನ, ಬಾಹ್ಯಾಕಾಶ ಮತ್ತು ಉತ್ಪಾದನೆಯಲ್ಲಿ ಭಾರತದ ಪ್ರಗತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಮೋದಿ, ಆತ್ಮನಿರ್ಭರ ಭಾರತವನ್ನು ವಿಕ್ಷಿತ್ ಭಾರತಕ್ಕೆ ಪ್ರಮುಖ ಅಡಿಪಾಯಗಳಲ್ಲಿ ಒಂದೆಂದು ಒತ್ತಿ ಹೇಳಿದರು. ಆಪರೇಷನ್ ಸಿಂದೂರ್ ಬಗ್ಗೆ ಪ್ರಸ್ತಾಪಿಸಿದ ಅವರು ಕಾರ್ಯತಂತ್ರದ ಸ್ವಾಯತ್ತತೆ ಮತ್ತು ಸ್ಥಳೀಯ/ದೇಶೀಯ ಸಾಮರ್ಥ್ಯಗಳು ಬೆದರಿಕೆಗಳನ್ನು ನಿರ್ಣಾಯಕವಾಗಿ ನಿಭಾಯಿಸಲು, ಸ್ವಾವಲಂಬನೆಯನ್ನು ರಾಷ್ಟ್ರೀಯ ಶಕ್ತಿ, ಘನತೆಯ ಆಧಾರಸ್ತಂಭವನ್ನಾಗಿ ಮಾಡಲು ಮತ್ತು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತಕ್ಕೆ ಪ್ರಯಾಣ ಬೆಳೆಸಲು ಪ್ರಮುಖವಾಗಿವೆ ಎಂದು ಹೇಳಿದರು.79ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೆಂಪು ಕೋಟೆಯ ಪ್ರಾಂಗಣದಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
August 15th, 07:00 am
ಈ ಸ್ವಾತಂತ್ರ್ಯೋತ್ಸವವು ನಮ್ಮ ಜನರ 140 ಕೋಟಿ ಸಂಕಲ್ಪಗಳ ಆಚರಣೆಯಾಗಿದೆ. ಈ ಸ್ವಾತಂತ್ರ್ಯೋತ್ಸವವು ಸಾಮೂಹಿಕ ಸಾಧನೆಗಳು ಮತ್ತು ಹೆಮ್ಮೆಯ ಕ್ಷಣವಾಗಿದೆ ಮತ್ತು ನಮ್ಮ ಹೃದಯಗಳು ಸಂತೋಷದಿಂದ ತುಂಬಿವೆ. ರಾಷ್ಟ್ರವು ನಿರಂತರವಾಗಿ ಏಕತೆಯ ಮನೋಭಾವವನ್ನು ಬಲಪಡಿಸುತ್ತಿದೆ. ಇಂದು, 140 ಕೋಟಿ ಭಾರತೀಯರು ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸುತ್ತಿದ್ದಾರೆ. ಮರುಭೂಮಿಯಾಗಿರಲಿ, ಹಿಮಾಲಯದ ಶಿಖರಗಳಾಗಿರಲಿ, ಸಮುದ್ರ ತೀರಗಳಾಗಿರಲಿ, ಅಥವಾ ಜನನಿಬಿಡ ಪ್ರದೇಶಗಳಾಗಿರಲಿ, 'ಹರ್ ಘರ್ ತಿರಂಗಾ' ಹಾರುತ್ತಿದೆ, ಎಲ್ಲೆಡೆ ಒಂದೇ ಪ್ರತಿಧ್ವನಿ, ಒಂದೇ ಹರ್ಷೋದ್ಗಾರ: ನಮ್ಮ ಜೀವಕ್ಕಿಂತ ಪ್ರಿಯವಾದ ನಮ್ಮ ತಾಯ್ನಾಡಿಗೆ ಜೈ.India celebrates 79th Independence Day
August 15th, 06:45 am
PM Modi, in his address to the nation on the 79th Independence day paid tribute to the Constituent Assembly, freedom fighters, and Constitution makers. He reiterated that India will always protect the interests of its farmers, livestock keepers and fishermen. He highlighted key initiatives—GST reforms, Pradhan Mantri Viksit Bharat Rozgar Yojana, National Sports Policy, and Sudharshan Chakra Mission—aimed at achieving a Viksit Bharat by 2047. Special guests like Panchayat members and “Drone Didis” graced the Red Fort celebrations.